ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳಾದ ಧ್ರುವ್ ಹಾಗೂ ಜೋಶಿಸ್ ತಂಡವು ರಸ್ತೆಗುಂಡಿಗಳನ್ನು ಪತ್ತೆಹಚ್ಚಿ ಅಪಘಾತಗಳನ್ನು ತಡೆಯುವ ‘ಸ್ಮಾರ್ಟ್ ಪಾತ್ ಹೋಲ್’ ಸಾಧನ ಅಭಿವೃದ್ಧಿಪಡಿಸಿದ್ದರು ಪ್ರದರ್ಶಿಸಿದ್ದರು. ಈ ಸಾದನವು ರಸ್ತೆಬದಿ ಎತ್ತರದ ಸ್ಥಳದಲ್ಲಿ ಸ್ಥಾಪಿಸಿ ಅಲ್ಲಿನ ರಸ್ತೆಗುಂಡಿಗಳನ್ನು ಕರಾರುವಕ್ಕಾಗಿ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತದೆ. ಇದನ್ನು ಸಾಫ್ಟ್‌ವೇರ್ ಸಹಾಯದಿಂದ ಸಂಗ್ರಹಿಸಿ ಆ ಗುಂಡಿಯನ್ನು ಮುಚ್ಚಲು ಮಾಹಿತಿ ನೀಡುತ್ತದೆ. ಇದನ್ನು ಸ್ಥಳೀಯ ಸಂಸ್ಥೆಯವರು ಬಳಸಿಕೊಂಡು ರಸ್ತೆಗುಂಡಿ ಮುಚ್ಚಿ ಅಪಘಾತ ತಪ್ಪಿಸಬಹುದಾಗಿದೆ. ಇದರಿಂದ ಹಲವು ಅಮೂಲ್ಯ ಜೀವಗಳನ್ನು ಉಳಿಸುವ ಜತೆಗೆ ಸುರಕ್ಷಿತ ರಸ್ತೆಯನ್ನು ನಿರ್ವಹಿಸಲು ನೆರವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
95 ತಂಡಗಳ ಆಯ್ಕೆ:
ಸ್ಪರ್ಧೆಯಲ್ಲಿ ದೇಶದಾದ್ಯಂತ 480 ತಂಡಗಳು ನೋಂದಾಯಿಸಿಕೊಂಡಿದ್ದವು. ಇವುಗಳಲ್ಲಿ 95 ತಂಡಗಳನ್ನು ತಜ್ಞರ ಸಮಿತಿಯು ಅಂತಿಮ ಸ್ಪರ್ಧೆಗೆ ಆಯ್ಕೆ ಮಾಡಿತು. ಆಯ್ಕೆಯಾದ ತಂಡಗಳಲ್ಲಿ 23 ಹಾರ್ಡ್‌ವೇರ್ ಹಾಗೂ 72 ಸಾಫ್ಟ್‌ವೇರ್ ಯೋಜನೆಗಳು ಅಂತಿಮ ಸುತ್ತಿಗೆ ಸ್ಥಾನ ಪಡೆದುಕೊಂಡವು. ವಿಜೇತ ತಂಡಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.
ತಂತ್ರಜ್ಞಾನ ಕಲಿಕೆ ಮುಖ್ಯ:
ಸಿಎಂಆರ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಸಿ.ರಾಮಮೂರ್ತಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಹೊಸ ಸಂಶೋಧನೆ, ನಾವಿನ್ಯತೆಯ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ದೇಶದಲ್ಲಿನ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಗೊಳಿಸಬೇಕು. ಈ ನಿಟ್ಟಿನಲ್ಲಿ ಸಿಎಂಆರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕಲಿಕೆಗೆ ಪೂರಕವಾದ ಅತ್ಯಾಧುನಿಕ ಕಲಿಕಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಇದರ ಸದುಪಯೋಗ ಪಡೆದ ನಮ್ಮ ವಿದ್ಯಾರ್ಥಿಗಳು ದೇಶ – ವಿದೇಶಗಳಲ್ಲಿ ಸಾಧನೆ ಮಾಡಿದ್ದಾರೆ. ತಂತ್ರಜ್ಞಾನ ಕಲಿಕೆ ವಿದ್ಯಾರ್ಥಿಗಳ ಮುಖ್ಯ ಭಾಗವಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಫ್ರೆಂಡ್ಸ್ ಆಫ್ ಲೇಕ್ಸ್‌ನ ರಾಮಪ್ರಸಾದ್ ಉದ್ಘಾಟಿಸಿದರು. ಸಿಎಂಆರ್‌ಐಟಿ ಪ್ರಾಂಶುಪಾಲ ಡಾ. ಸಂಜಯ್ ಜೈನ್, ಉಪಪ್ರಾಂಶುಪಾಲ ಡಾ. ಬಿ.ನರಸಿಂಹಮೂರ್ತಿ, ಡೀನ್ ಹಾಗೂ ಹ್ಯಾಕಥಾನ್ ಸಂಯೋಜಕಿ ಡಾ.ಶರ್ಮಿಳಾ ಪಾಲ್ಗೊಂಡಿದ್ದರು.
Visit CMR Institute of Technology official website at https://www.cmrit.ac.in/